ರಸ್ತೆ ಬದಿಯಲ್ಲಿ ಮೂತ್ರ ಮಾಡಿದವರಿಗೆ ಹೂವಿನ ಹಾರ ಹಾಕಿ ಸನ್ಮಾನ! | Oneindia Kannada

2017-11-03 1

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಎಷ್ಟು ಬೊಬ್ಬೆ ಹೊಡೆದರೂ, ದಂಡ ವಿಧಿಸಿದರೂ ನಮ್ಮ ಜನ ಕ್ಯಾರೇ ಅನ್ನುತ್ತಿಲ್ಲ. ಸುಲಭ ಶೌಚಾಲಯದ ವ್ಯವಸ್ಥೆಯಿದ್ದರೂ ನಮ್ಮ ಮಂದಿ ಅದರ ಬಗ್ಗೆ ಅರಿವೇ ಇಲ್ಲವೇನೂ ಎಂಬಂತೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಲೇ ಇರುತ್ತಾರೆ...ಇಂತಹವರಿಗೆ ತಕ್ಕ ಶಾಸ್ತಿ ಮಾಡಲು ಮೈಸೂರಿನ ಯುವ ಭಾರತ್ ಸಂಘಟನೆ ಇಂದು ಹೊಸ ಪ್ಲಾನ್ ಹಾಕಿತ್ತು. ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಸನ್ಮಾನ ಮಾಡಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಅರಿವು ಮೂಡಿಸಲಾಯಿತು. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ರಘಲಾಲ್ ಮೆಡಿಕಲ್ ಸ್ಟೋರ್ ನ ಮುಂಭಾಗ ತಗಡು ಶೀಟ್ ಗಳ ಸುತ್ತಲೂ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸಾರ್ವಜನಿಕರಿಗೆ ಹೂವಿನ ಹಾರ ಹಾಕಿ, ನಿಂಬೆಹಣ್ಣು ನೀಡಿ, ಗುಲಾಬಿ ಹೂ ಕೊಟ್ಟು ಅರಿವು ಮೂಡಿಸುವ ಪ್ರಯತ್ನ ಮಾಡಿದರು...

Mysuru: People have been given an innovative approach to stop urinating on the road sides.

Videos similaires